ಉಜ್ಜೀವನದ ಅಗ್ನಿ ಹೊತ್ತಿಸುವ ಎರಡು ದಿನಗಳ ವಿಶೇಷ ಸಭೆ


ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಹಂಗೋಡು ರಸ್ತೆಯಲ್ಲಿರುವ ಶಾಲೋಮ್ ಪ್ರಾರ್ಥನಾ ಮಂದಿರದಲ್ಲಿ ಜುಲೈ 4 ಮತ್ತು 5, ಎರಡು ದಿನಗಳ ವಿಶೇಷ ಉಜ್ಜೀವನ ಕೂಟವನ್ನು (Revival Meeting) ಆಯೋಜಿಸಲಾಗಿದೆ.

ಈ ಆಧ್ಯಾತ್ಮಿಕ ಸಭೆಯಲ್ಲಿ ಆಂಧ್ರಪ್ರದೇಶದ ಚಿಲುಕೂರು ಮೂಲದ ಪ್ರಸಿದ್ಧ ದೇವರ ಸೇವಕರಾದ ಬ್ರದರ್. ಕಿಶೋರ್ ವೆಸ್ಲಿ ಅವರು ದೇವರ ವಾಕ್ಯವನ್ನು ಹಂಚಿಕೊಳ್ಳಲಿದ್ದು, ವಿಶ್ವಾಸಿಗಳ ಆತ್ಮೀಕ ಬೆಳವಣಿಗೆ, ರೋಗಿಗಳಿಗಾಗಿ ಪ್ರಾರ್ಥನೆ ಹಾಗೂ ಪುನರುಜ್ಜೀವನ ಸಂದೇಶಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.

ಸಭಾ ಪಾಲಕರಾದ ಪಾಸ್ಟರ್. ಲಕ್ಷ್ಮಣ್ ಅವರ ನೇತೃತ್ವದಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಎಲ್ಲಾ ಕ್ರೈಸ್ತ ವಿಶ್ವಾಸಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.

ಯೇಸುವಿನ ವಾಕ್ಯದ ಶಕ್ತಿಯನ್ನು ಸಾರುವ “ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳು ಗುಣವಾಗುವನು” (ಮತ್ತಾಯ 8:8) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಈ ಉಜ್ಜೀವನ ಕೂಟವು ಅನೇಕ ಮಂದಿಗೆ ಆತ್ಮೀಕ ಆಶೀರ್ವಾದದ ಅನುಭವವನ್ನು ನೀಡಲಿದೆ ಎಂದು ಪಾಸ್ಟರ್. ಲಕ್ಷ್ಮಣ್  ತಿಳಿಸಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW