*ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಾಣಕ್ಕೆ ಬ್ರೇಕ್: ಮದ್ರಾಸ್ ಹೈಕೋರ್ಟ್‌ನಿಂದ ಮಧ್ಯಂತರ ತಡೆ”*


ಚೆನ್ನೈ: ಕೊಯಮತ್ತೂರಿನ ಕಲಾಪಟ್ಟಿ ಪ್ರದೇಶದಲ್ಲಿರುವ ಶತಮಾನಗಳ ಇತಿಹಾಸವಿರುವ ಮಾರಿಯಮ್ಮನ್ ದೇವಸ್ಥಾನ ಸಮೀಪ ಚರ್ಚ್ ನಿರ್ಮಾಣ ಕಾರ್ಯಕ್ಕೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ದೇವಸ್ಥಾನದ ಅಕ್ಕಪಕ್ಕದಲ್ಲಿ ದೊಡ್ಡ ಚರ್ಚ್ ನಿರ್ಮಿಸುವ ಉದ್ದೇಶದ ಹಿಂದೆ ದುರುದ್ದೇಶ ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಜಿ  ಆರ್ ಸ್ವಾಮಿನಾಥನ್ ಹಾಗೂ  ವಿ  ಲಕ್ಷ್ಮೀನಾರಾಯಣ್ ಅವರಿದ್ದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ. ಸ್ಥಳೀಯ ನಿವಾಸಿ ಬಾಲಸುಬ್ರಹ್ಮಣ್ಯಂ ಸಲ್ಲಿಸಿದ್ದ ಅರ್ಜಿಯಲ್ಲಿ, ಸರ್ಕಾರಿ ಭೂಮಿ ಹಾಗೂ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ನಿರ್ಮಾಣ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಚರ್ಚ್ ನಿರ್ಮಾಣಕ್ಕೆ ನೀಡಿದ್ದ ಪೊಲೀಸ್ ಭದ್ರತೆಯನ್ನೂ ಪ್ರಶ್ನಿಸಲಾಗಿತ್ತು.

ಸಾಮುದಾಯಿಕವಾಗಿ ಸೂಕ್ಷ್ಮ ಪ್ರದೇಶವಾದ ಕೊಯಮತ್ತೂರಿನಲ್ಲಿ ಧಾರ್ಮಿಕ ಸೌಹಾರ್ದ ಕಾಪಾಡುವುದು ಅತ್ಯಗತ್ಯ ಎಂದು ನ್ಯಾಯಾಲಯ ಹೇಳಿದೆ. ಸ್ಥಳೀಯ ಹಿಂದೂ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಅಧಿಕಾರಿಗಳು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW