ಕೊಡ್ಲಿಪೇಟೆ, IPC ಚರ್ಚ್‌ನಲ್ಲಿ ಈಸ್ಟರ್ ಸಂಡೇ ಭಕ್ತಿಪೂರ್ವಕ ಆಚರಣೆ


ಕೊಡ್ಲಿಪೇಟೆ, ಏಪ್ರಿಲ್ 5: ಕೊಡ್ಲಿಪೇಟೆಯ ಐಪಿಸಿ ಚರ್ಚ್‌ನಲ್ಲಿ ಈಸ್ಟರ್ ಸಂಡೇ ಭಕ್ತಿಪೂರ್ವಕ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಹಾಗೂ ಆರಾಧನೆಗಳಲ್ಲಿ ತೊಡಗಿದರು.

ಸಭಾ ಪಾಲಕರಾದ ಪಾಸ್ಟರ್ ಫ್ರೆಡ್ಡಿ ಅವರು ಯೇಸು ಕ್ರಿಸ್ತನ ಪುನರುತ್ಥಾನದ ಮಹತ್ವದ ಕುರಿತು ಆಳವಾದ ಸಂದೇಶ ನೀಡಿದರು. ಕ್ರೈಸ್ತ ಧರ್ಮದಲ್ಲಿ ಈಸ್ಟರ್ ಹಬ್ಬವು ಪ್ರಮುಖ ಸ್ಥಾನವನ್ನು ಹೊಂದಿದ್ದು, ಯೇಸು ಕ್ರಿಸ್ತನು ಶಿಲುಬೆಗೆ ಏರಿದ ಮೂರನೇ ದಿನ ಪುನರುತ್ಥಾನ ಹೊಂದಿದ ಘಟನೆಗೆ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಯೇಸು ಕ್ರಿಸ್ತನು ಶಿಲುಬೆಗೆ ಏರಿದ ದಿನವನ್ನು ಶುಭ ಶುಕ್ರವಾರ (ಗುಡ್ ಫ್ರೈಡೆ) ಎಂದು ಆಚರಿಸಲಾಗುತ್ತಿದ್ದು, ಅದರ ಮೂರನೇ ದಿನವೇ ಈಸ್ಟರ್ ಸಂಡೇ ಆಗಿದೆ. ಈ ದಿನ ಕ್ರೈಸ್ತರು ವಿಶ್ವದಾದ್ಯಂತ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ.

ಈ ಸಂದರ್ಭದಲ್ಲಿ ಚರ್ಚ್‌ನಲ್ಲಿ ಬೆಳಗ್ಗೆಯಿಂದಲೇ ವಿಶೇಷ ಗೀತೆಗಳು, ಆರಾಧನೆಗಳು ಹಾಗೂ ಪ್ರಾರ್ಥನೆಗಳು ನಡೆದವು. ಭಕ್ತರು ಭಕ್ತಿಭಾವದಿಂದ ಭಾಗವಹಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು