ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಐಪಿಸಿ ಕರಿಸ್ಮಾ ಸೆಂಟರ್ ಮಹಾಸಮ್ಮೇಳನ


ಕುಶಾಲನಗರ: ಇಂಡಿಯನ್ ಪೆಂಟೆಕೋಸ್ಟಲ್ ಚರ್ಚ್ ಆಫ್ ಗಾಡ್ (ಐಪಿಸಿ) ಕರಿಸ್ಮಾ ಸೆಂಟರ್ ವತಿಯಿಂದ ಜೂನ್ 26ರಂದು ಕುಶಾಲನಗರದ ತಪೋವನದಲ್ಲಿ ವಿಶೇಷ ಪ್ರಾರ್ಥನಾ ಮಹಾಸಮ್ಮೇಳನ ನಡೆಯಲಿದೆ.

ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಈ ಆಧ್ಯಾತ್ಮಿಕ ಸಮಾವೇಶದಲ್ಲಿ ಐಪಿಸಿ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ವರ್ಗೀಸ್ ಫಿಲಿಪ್, ರಾಜ್ಯ ಕಾರ್ಯದರ್ಶಿ ಪಾಸ್ಟರ್ ವರ್ಗೀಸ್ ಮ್ಯಾಥ್ಯೂ ಹಾಗೂ ಪಾಸ್ಟರ್ ಡಾ. ಎನ್.ಕೆ. ಜಾರ್ಜ್ ಅವರು ಮುಖ್ಯ ಸಂದೇಶ ನೀಡಲಿದ್ದಾರೆ ಹಾಗೂ ಐಪಿಸಿ ರಾಜ್ಯ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ  ಸಂದೇಶ ನೀಡಲಿದ್ದಾರೆ ಇದೇ ವೇಳೆ ವಿಶೇಷ ಪ್ರಾರ್ಥನೆ, ಹಸ್ತಾರ್ಪಣೆ  ಸೇವೆಗಳು ನಡೆಯಲಿವೆ.

ಕೊಡಗು,ಬೆಂಗಳೂರು , ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳಿಂದ ಪಾಸ್ಟರ್‌ಗಳು,  ಸುವಾರ್ತಕರು ಮತ್ತು ವಿಶ್ವಾಸಿಗಳು ಪಾಲ್ಗೊಳ್ಳಲಿದ್ದಾರೆ,  

ವಿಶ್ವಾಸಿಗಳಲ್ಲಿ ಆಧ್ಯಾತ್ಮಿಕ ಪುನರುಜ್ಜೀವನ ಮೂಡಿಸುವುದು, ದೇವರ ಸೇವೆಯಲ್ಲಿ ಸಮರ್ಪಣಾ ಮನೋಭಾವವನ್ನು ಬೆಳೆಸುವುದು ಹಾಗೂ ಕ್ರೈಸ್ತ ಸಮುದಾಯದ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ಮಹಾಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕರಿಸ್ಮಾ ಸೆಂಟರ್ ಅಧ್ಯಕ್ಷ ಪಾಸ್ಟರ್ ಕೆ.ವಿ. ಜೋಸ್ ತಿಳಿಸಿದ್ದಾರೆ.

ಈ ವಿಶೇಷ ಪ್ರಾರ್ಥನಾ ಮಹಾಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಹೊಂದುವಂತೆ ಅವರು ವಿಶ್ವಾಸಿಗಳಿಗೆ ಮನವಿ ಮಾಡಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW