ಭಾರತದ ವ್ಯಾಟಿಕನ್ ರಾಯಭಾರಿ Archbishop leopoldo Girelli ಅವರಿಗೆ ದೆಹಲಿಯಲ್ಲಿ ಗೌರವಪೂರ್ವಕ ವಿದಾಯ




ನವದೆಹಲಿ: ಭಾರತದಲ್ಲಿನ ವ್ಯಾಟಿಕನ್ ರಾಯಭಾರಿಯಾಗಿ (ಅಪೋಸ್ಟೋಲಿಕ್ ನನ್ಸಿಯೋ) ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಆರ್ಚ್‌ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಅವರಿಗೆ ದೆಹಲಿಯ ಆರ್ಚ್‌ಡಯೋಸಿಸ್ ವತಿಯಿಂದ ನವದೆಹಲಿಯ ‘ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್’ನಲ್ಲಿ ಭಾವಪೂರ್ಣ ವಿದಾಯ ಸಮಾರಂಭವನ್ನು ಆಯೋಜಿಸಲಾಯಿತು.

ದೆಹಲಿಯ ಆರ್ಚ್‌ಬಿಷಪ್ ಅನಿಲ್ ಕೂಟೊ ಅವರು ಧರ್ಮಪ್ರಾಂತ್ಯದ ಪರವಾಗಿ ಗಿರೆಲ್ಲಿ ಅವರನ್ನು ಸನ್ಮಾನಿಸಿ, ಭಾರತದಲ್ಲಿನ ಕ್ಯಾಥೋಲಿಕ್ ಸಮುದಾಯದ ಬೆಳವಣಿಗೆಗೆ ನೀಡಿದ ಅವರ ಮಹತ್ವದ ಕೊಡುಗೆಯನ್ನು ಶ್ಲಾಘಿಸಿದರು.

ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ (CCBI) ಪರವಾಗಿ ರೆವ. ಡಾ. ಸ್ಟೀಫನ್ ಅಲಾತ್ತರ ಅವರು ಗಿರೆಲ್ಲಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಶ್ರಮಿಸಿದ ಗಿರೆಲ್ಲಿ ಅವರು, ತಮ್ಮ ಮುಂದಿನ ಸೇವೆಯನ್ನು ಕ್ರೊಯೇಶಿಯಾ ದೇಶದಲ್ಲಿ ಮುಂದುವರಿಸಲಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಮತ್ತು ಭಕ್ತರು, ಅವರ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿ ಕೃತಜ್ಞತೆಯೊಂದಿಗೆ ಬೀಳ್ಕೊಟ್ಟರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW