ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ ಹಿನ್ನೆಲೆ: ಜೂನ್ 28ನ್ನು ರಾಷ್ಟ್ರೀಯ ಪ್ರಾರ್ಥನಾ ದಿನವನ್ನಾಗಿ ಆಚರಿಸಲು ಸಿಬಿಸಿಐ ಕರೆ


ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ–2026 ಕುರಿತು ವ್ಯಕ್ತವಾಗಿರುವ ಆತಂಕಗಳ ಹಿನ್ನೆಲೆಯಲ್ಲಿ, ಜೂನ್ 28ರಂದು ದೇಶವ್ಯಾಪಿ ರಾಷ್ಟ್ರೀಯ ಪ್ರಾರ್ಥನಾ ದಿನ ಆಚರಿಸಲು Catholic Bishops' Conference of India (ಸಿಬಿಸಿಐ) ಕರೆ ನೀಡಿದೆ.

ಈ ಕುರಿತು ದೇಶದ ಎಲ್ಲಾ ಬಿಷಪ್‌ಗಳು, ಪಾದ್ರಿಗಳು, ಧಾರ್ಮಿಕ ಸೇವಕರು ಹಾಗೂ ವಿಶ್ವಾಸಿಗಳಿಗೆ ಕಳುಹಿಸಿದ ಸರ್ಕ್ಯುಲರ್‌ನಲ್ಲಿ ಸಿಬಿಸಿಐ ಅಧ್ಯಕ್ಷರಾದ Cardinal Anthony Poola ವಿಶೇಷ ಪ್ರಾರ್ಥನಾ ಕೂಟಗಳನ್ನು ಆಯೋಜಿಸುವಂತೆ ಮನವಿ ಮಾಡಿದ್ದಾರೆ. ಇತರ ಕ್ರೈಸ್ತ ಪಂಗಡಗಳೊಂದಿಗೆ ಕೈಜೋಡಿಸಿ ಸಂಯುಕ್ತ ಪ್ರಾರ್ಥನಾ ಸಭೆಗಳನ್ನು ನಡೆಸುವಂತೆಯೂ ಸೂಚಿಸಲಾಗಿದೆ.

ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ ಏಪ್ರಿಲ್‌ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದ್ದರೂ, ವಿರೋಧದ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳು ಕೈಗೊಳ್ಳಲಾಗಿರಲಿಲ್ಲ. ಆದರೆ ಜುಲೈನಲ್ಲಿ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮತ್ತೆ ಮಂಡಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕರೆ ನೀಡಲಾಗಿದೆ.

ಇದಲ್ಲದೆ, ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಮಾರ್ಗದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸುವ ಉದ್ದೇಶದಿಂದ ಧರ್ಮಪ್ರಾಂತಗಳು ಹಾಗೂ ಚರ್ಚ್‌ಗಳ ಮೂಲಕ ಸಹಿ ಸಂಗ್ರಹ ಅಭಿಯಾನ ನಡೆಸಿ, ಸಂಬಂಧಿತ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸುವಂತೆ ಕೂಡ ಸರ್ಕ್ಯುಲರ್‌ನಲ್ಲಿ ಮನವಿ ಮಾಡಲಾಗಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW