ಆತ್ಮಿಕ ಉಜ್ಜೀವನಕ್ಕೆ ವೇದಿಕೆ: ಮಡಿಕೇರಿಯಲ್ಲಿ ವಿಶೇಷ ಪ್ರಾರ್ಥನಾ ಸಮಾವೇಶ


ಮಡಿಕೇರಿ:
ಐ.ಟಿ.ಆರ್.ಎ.ಜಿ. ಮಿನಿಸ್ಟ್ರಿಸ್ ಕೊಡಗು ಆಶ್ರಯದಲ್ಲಿ “ಉಜ್ಜೀವನ ಮತ್ತು ಜಯೋತ್ಸವ” ಎಂಬ ಶೀರ್ಷಿಕೆಯಲ್ಲಿ ಒಂದು ದಿನದ ವಿಶೇಷ ಉಪವಾಸ ಪ್ರಾರ್ಥನಾ ಸಭೆಯನ್ನು ಮೇ 28, 2026 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಆಯೋಜಿಸಲಾಗಿದೆ.

ಈ ಆತ್ಮಿಕ ಕಾರ್ಯಕ್ರಮವು ವಿಶ್ವಾಸಿಗಳನ್ನು ಪ್ರಾರ್ಥನೆ, ಆರಾಧನೆ ಹಾಗೂ ದೇವರ ವಾಕ್ಯದ ಮೂಲಕ ಆತ್ಮಿಕವಾಗಿ ಬಲಪಡಿಸುವ ಉದ್ದೇಶದಿಂದ ನಡೆಯಲಿದ್ದು, ವಿಶೇಷ ಸಂದೇಶಗಳು, ಆರಾಧನೆ ಮತ್ತು ಆತ್ಮಿಕ ಚಟುವಟಿಕೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿವೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರವಾದಿ ಪ್ರಶಾಂತ್ ಟಿ.ವಿ.ಎಂ (ಕೇರಳ) ದೇವರ ವಾಕ್ಯವನ್ನು ಹಂಚಿಕೊಳ್ಳಲಿದ್ದಾರೆ. ಸಹೋ. ಜೈಸನ್ ಜಾನ್ ಅವರು ಭಾಷಾಂತರ ಸೇವೆಯನ್ನು ನಿರ್ವಹಿಸಲಿದ್ದು, ಆರಾಧನೆಯನ್ನು ಉಡುಪಿಯ ಸಹೋ. ನಿಖಿತಾ ಎಂ ಗಿಡಿಯೋನ್ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಆಯೋಜನೆಯನ್ನು ಪಾ. ಜಾನ್ಸನ್, ಮಡಿಕೇರಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ವಿಶ್ವಾಸಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಶೀರ್ವಾದವನ್ನು ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

9611538832, 9535441365, 63626 44353.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW