ನವದೆಹಲಿ: 30 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಭಾರತ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ (CBCI) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ತೀರ್ಪು ಮಗುವಿನ ಜೀವಿಸುವ ಹಕ್ಕನ್ನು ಪ್ರಶ್ನಿಸುವಂತಿಲ್ಲವೇ ಎಂಬುದಾಗಿ ಚರ್ಚ್ ಅಧಿಕೃತರು ಪ್ರಶ್ನಿಸಿದೆ. ಗರ್ಭವು ಇಷ್ಟು ಅಭಿವೃದ್ಧಿಯ ಹಂತ ತಲುಪಿದ ನಂತರ ಅದನ್ನು ಕೊನೆಗೊಳಿಸುವುದು ವೈದ್ಯಕೀಯವಾಗಿ ಅಪಾಯಕಾರಿ ಎಂದು ಪರಿಣಿತರು ಸೂಚಿಸಿದ್ದಾರೆ.
ಇನ್ನೂ ಕೆಲವು ವಾರಗಳು ಕಾಯುವುದರಿಂದ ತಾಯಿ ಮತ್ತು ಮಗುವಿನ ಜೀವ ಹೆಚ್ಚು ಸುರಕ್ಷಿತವಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಮಗುವಿನ ಜವಾಬ್ದಾರಿಯನ್ನು ಸರ್ಕಾರವೇ ಸ್ವೀಕರಿಸಲು ಸಿದ್ಧವಾಗಿದ್ದರೂ, ನ್ಯಾಯಾಲಯ ಇಂತಹ ತೀರ್ಮಾನ ಕೈಗೊಂಡಿರುವುದರ ಬಗ್ಗೆ ಪ್ರಶ್ನೆ ಎತ್ತಲಾಗಿದೆ.
ಸಂವಿಧಾನ ಮೌಲ್ಯಗಳು ಮತ್ತು ನೈತಿಕತೆಯನ್ನು ಕಾಪಾಡುವ ದೃಷ್ಟಿಯಿಂದ, ಮಗುವಿನ ಜೀವವನ್ನು ರಕ್ಷಿಸಲು ಈ ತೀರ್ಪನ್ನು ತಕ್ಷಣ ಮರುಪರಿಶೀಲನೆ ಮಾಡಬೇಕು ಎಂದು CBCI ಆಗ್ರಹಿಸಿದೆ.
ಅಂತಿಮವಾಗಿ, ಮಗುವಿನ ಜೀವವನ್ನು ನಾಶ ಮಾಡುವ ಬದಲು ಮಾನವೀಯ ಪರಿಹಾರಗಳನ್ನು ಹುಡುಕುವ ಅಗತ್ಯವಿದೆ ಎಂದು ಚರ್ಚ್ ನ ಅಧಿಕೃತರು ತಿಳಿಸಿದೆ.
