ಬೆಂಗಳೂರು: ಐಪಿಸಿ ಕರಿಸ್ಮಾ ಕೇಂದ್ರದ ವತಿಯಿಂದ ಮೂರು ದಿನಗಳ ಸೇವಕರ ಮಹಾಸಮ್ಮೇಳನವು ಮೇ 12ರಿಂದ 14, 2026 ರವರೆಗೆ ಕೇರಳ ರಾಜ್ಯದ ಮೀನಂಗಾಡಿ (ಸುಲ್ತಾನ್ ಬಥೇರಿ)ಯಲ್ಲಿ ನಡೆಯಲಿದೆ.
“ಚರ್ಚುಗಳ ಬಲವರ್ಧನೆ” ಎಂಬ ಮಹತ್ವದ ವಿಷಯದಡಿ ಈ ಮಹಾಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಭಾ ಪಾಲಕರ ಆತ್ಮೀಯ ಬೆಳವಣಿಗೆ ಹಾಗೂ ಸೇವಾ ಸಾಮರ್ಥ್ಯವನ್ನು ವೃದ್ಧಿಪಡಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.
ಮೇ 12 ರಂದು ಬೆಳಿಗ್ಗೆ 8:00 ಗಂಟೆಗೆ ಆರಂಭವಾಗುವ ಈ ಮಹಾಸಮ್ಮೇಳನವು ಮೇ 14 ರಂದು ಸಂಜೆ 4:00 ಗಂಟೆಗೆ ಸಮಾಪ್ತಿಯಾಗಲಿದೆ. ಕಾರ್ಯಕ್ರಮದ ಅವಧಿಯಲ್ಲಿ ಬೈಬಲ್ ಅಧ್ಯಯನ ತರಗತಿಗಳು, ಆಳವಾದ ಆತ್ಮೀಯ ವಿಚಾರ ಸಂಕಿರಣಗಳು, ಆರಾಧನಾ ಕೂಟಗಳು ಹಾಗೂ ಕರ್ತನ ಪವಿತ್ರ ಭೋಜನ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಐಪಿಸಿ ಕರ್ನಾಟಕ ರಾಜ್ಯದ ಪ್ರಮುಖ ನಾಯಕರುಗಳು ಹಾಗೂ ವಿವಿಧ ಕ್ರೈಸ್ತ ಸಂಸ್ಥೆಗಳ ಸೇವಕರುಗಳು ಸಂದೇಶಗಳನ್ನು ನೀಡಲಿದ್ದಾರೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇವಕರುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕರಿಸ್ಮಾ ಸೆಂಟರ್ ನ ಅಧ್ಯಕ್ಷರಾದ ಪಾಸ್ಟರ್ ಕೆ. ವಿ. ಜೋಸ್ ತಿಳಿಸಿದ್ದಾರೆ.
