ಆತ್ಮಿಕ ಜಾಗೃತಿಗೆ ವೇದಿಕೆ: PYPA ವತಿಯಿಂದ ಶಿವಮೊಗ್ಗದಲ್ಲಿ ಯುವ ಶಿಬಿರ


ಬೆಂಗಳೂರು: ಪಿವೈಪಿಎ(PYPA) ಕರ್ನಾಟಕ ರಾಜ್ಯದ ವತಿಯಿಂದ ಮೂರು ದಿನಗಳ ವಿಶೇಷ ಕನ್ನಡ ಶಿಬಿರವನ್ನು ಏಪ್ರಿಲ್ 30, ಮೇ 1 ಮತ್ತು 2ರಂದು ಶಿವಮೊಗ್ಗದ ಸನ್ನಿಧಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ದೇವರ ವಾಕ್ಯ ಅಧ್ಯಯನ, ಆರಾಧನೆ, ಕ್ರೀಡಾಕೂಟಗಳು, ವಿವಿಧ ಚಟುವಟಿಕೆಗಳು ಹಾಗೂ ಕ್ಯಾಂಪ್ ಫೈರ್ ಕಾರ್ಯಕ್ರಮಗಳು ನಡೆಯಲಿವೆ. ಯುವಜನರಿಗೆ ಆತ್ಮಿಕ ಬೆಳವಣಿಗೆ ಜೊತೆಗೆ ಸ್ನೇಹಭಾವ, ಶಿಸ್ತಿನ ಜೀವನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಅಪೂರ್ವ ಅವಕಾಶ ಇದಾಗಿದೆ.

ಶಿಬಿರವನ್ನು ಬ್ರದರ್ ಜೋಬಿ ಜೋಸೆಫ್, ಬ್ರದರ್ ಜೆರಿನ್ ಅಬ್ರಹಾಂ, ಬ್ರದರ್ ಜಿನ್ಸನ್ ಡಿ ಥಾಮಸ್, ಬ್ರದರ್ ಜಸ್ಟಿನ್ ಕೆ ಮ್ಯಾಥ್ಯೂಸ್, ಸಿಸ್ಟರ್ ಸೌಮ್ಯಾ ಜೋಸೆಫ್ ಹಾಗೂ ಬ್ರದರ್ ಜೇಮ್ಸ್ ಜಾನ್ ಮುನ್ನಡೆಸಲಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಯುವಕರು ಭಾಗವಹಿಸುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Click here for registration