ಯಶವಂತಪುರದಲ್ಲಿ ಪ್ರಾರ್ಥನಾ ಜ್ವಾಲೆ: 21 ದಿನಗಳ ಉಪವಾಸ ಕೂಟ


ಬೆಂಗಳೂರು:  ಯಶವಂತಪುರ ಬೆರಾಕ ಫುಲ್ ಗಾಸ್ಪೆಲ್ ಚರ್ಚ್ ವತಿಯಿಂದ 21 ದಿನಗಳ ಉಪವಾಸ ಪ್ರಾರ್ಥನಾ ಕೂಟವನ್ನು ಆಯೋಜಿಸಲಾಗಿದೆ.

ಈ ಆತ್ಮೀಯ ಕೂಟವು ಏಪ್ರಿಲ್ 13ರಿಂದ ಮೇ 3, 2026ರವರೆಗೆ ಪ್ರತಿದಿನ ಬೆಳಿಗ್ಗೆ 10:00 ಗಂಟೆಗೆ ಹಾಗೂ ಸಂಜೆ 6:00 ಗಂಟೆಗೆ ನಡೆಯಲಿದೆ.

ಸಭೆಯಲ್ಲಿ ರೆವ. ಡಾ. ಎಂ. ಎ. ವರ್ಗೀಸ್ ಅವರ ಪ್ರಮುಖ ಸಂದೇಶದೊಂದಿಗೆ ವಿವಿಧ ಪ್ರದೇಶಗಳಿಂದ ಆಗಮಿಸುವ ದೇವರ ಸೇವಕರುಗಳು ದೇವರ ವಾಕ್ಯವನ್ನು ಸಾರಲಿದ್ದಾರೆ. ಪ್ರಮುಖವಾಗಿ ಪ್ರವಾದಿ. ಸ್ರೀಜಿತ್ ಕಾಯಂಕುಳಂ, ಪ್ರವಾದಿ ಆರೋನ್, ಪಾಸ್ಟರ್. ರಾಯ್ ಮ್ಯಾಥ್ಯೂ, ಪಾಸ್ಟರ್ ಶಿಬು ಕೆ. ಮತ್ತಾಯಿ, ಪಾಸ್ಟರ್. ನೋಹಾ ಪಾಸ್ಟರ್. ಎಲಿಶಾ ರಾಜ್, ಸಹೋದರ ಪ್ರವೀಣ್ ಸೇರಿದಂತೆ ಹಲವರು ದೇವರ ಸಂದೇಶ ಹಂಚಲಿದ್ದಾರೆ.

ಈ ಉಪವಾಸ ಕೂಟವು ವಿಶ್ವಾಸಿಗಳ ಆತ್ಮೀಯ ಜೀವನದಲ್ಲಿ ನವೀಕರಣ ತರಲಿದ್ದು, ಹೆಚ್ಚಿನ ಜನರಿಗೆ ಆಶೀರ್ವಾದವಾಗಲಿದೆ 

ಬೆಂಗಳೂರಿನ ಯಶವಂತಪುರದಲ್ಲಿರುವ ಬೆರಾಕ ಫುಲ್ ಗಾಸ್ಪೆಲ್ ಚರ್ಚ್‌ನಲ್ಲಿ ನಡೆಯಲಿದ್ದು, ಎಲ್ಲಾ ವಿಶ್ವಾಸಿಗಳನ್ನು ಪ್ರಾರ್ಥನಾಪೂರ್ವಕವಾಗಿ ಭಾಗವಹಿಸಲು ಆಯೋಜಕರಾದ ಪಾಸ್ಟರ್ ಎಜಿಕಿಯೇಲ್ ಉದಯ್ ಹಾಗೂ ಸಿಸ್ಟರ್ ವೀಣಾ ಉದಯ್ ತಿಳಿಸಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW