ಪೆಂಟೆಕೋಸ್ಟಲ್ ಚರ್ಚ್‌ಗಳ ಒಗ್ಗಟ್ಟಿಗೆ ಹೊಸ ಬಲ: ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ


ಕೊಡ್ಲಿಪೇಟೆ:
ಕರ್ನಾಟಕ ಪೆಂಟೆಕೋಸ್ಟಲ್ ಚರ್ಚ್ಸ್ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆ ಗುರುವಾರ ಕೊಡ್ಲಿಪೇಟೆಯ ಪ್ರಧಾನ ಕಚೇರಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಪಾಸ್ಟರ್. ಅಬ್ರಹಾಂ ಕೊಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಾಸ್ಟರ್ ರಾಮು ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಪಾಸ್ಟರ್. ಜೋಶುವ ಅವರು ಸ್ವಾಗತ ಭಾಷಣ ಮಾಡಿದರು. ಬಳಿಕ ಅಧ್ಯಕ್ಷ ಪಾಸ್ಟರ್. ಅಬ್ರಹಾಂ ಕೊಶಿ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಅಸೋಸಿಯೇಶನ್ ಸ್ಥಾಪನೆಯ ಹಿನ್ನೆಲೆ, ಉದ್ದೇಶ ಹಾಗೂ ಸಂಘದ ಬೆಳವಣಿಗೆಯ ಕುರಿತು ವಿವರಿಸಿದರು.

ಅಸೋಸಿಯೇಶನ್‌ನ ಮುಂದಿನ ಪ್ರಗತಿಗೆ ಎಲ್ಲ ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯವಿದೆ. ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯದರ್ಶಿಯವರ ಅನುಪಸ್ಥಿತಿಯಲ್ಲಿ ಪಾಸ್ಟರ್. ಮಂಜುನಾಥ್ ಅವರು ಹಿಂದಿನ ಮಹಾಸಭೆಯ ನಡವಳಿ ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ವರದಿಯ ಕುರಿತು ಸದಸ್ಯರು ಚರ್ಚೆ ನಡೆಸಿ ಅನುಮೋದಿಸಿದರು.

ಖಜಾಂಚಿ ಪಾಸ್ಟರ್. ಫ್ರೆಡ್ಡಿ. ಪಿ ಸಿ ಅವರು ಅಸೋಸಿಯೇಶನ್‌ನ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಲೆಕ್ಕಪತ್ರದ ಕುರಿತು ಚರ್ಚೆ ನಡೆದ ಬಳಿಕ ಸಭೆಯಲ್ಲಿ ಅಂಗೀಕರಿಸಲಾಯಿತು.

ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಪಾಸ್ಟರ್. ರಾಮು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತೆರವಾಗಿದ್ದ ಕಾರ್ಯದರ್ಶಿ ಸ್ಥಾನಕ್ಕೆ ಪಾಸ್ಟರ್. ಮಂಜುನಾಥ್ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ  ಪಾಸ್ಟರ್.ರಾಮು ಅವರನ್ನು ಆಯ್ಕೆ ಮಾಡಲಾಯಿತು.

ನಂತರ ಅಸೋಸಿಯೇಶನ್‌ನ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಸದಸ್ಯರು ಚರ್ಚೆ ನಡೆಸಿದರು. ಸಂಘವನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯರ ಸಹಕಾರವನ್ನು ಹೆಚ್ಚಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸಲಹೆ-ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW