ಈದ್ ಮಿಲಾದ್ ಸಂಭ್ರಮಕ್ಕೆ ಸಜ್ಜಾದ ಹ್ಯಾಂಡ್‌ಪೋಸ್ಟ್: ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮ


ಕೊಡ್ಲಿಪೇಟೆ: ಹ್ಯಾಂಡ್‌ಪೋಸ್ಟ್‌ನ ಮಸ್ಜಿದುನ್ನೂರ್ (ಸುನ್ನಿ ಜುಮ್ಮಾ ಮಸ್ಜಿದ್) ವತಿಯಿಂದ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 27ರಿಂದ 30ರವರೆಗೆ ನಾಲ್ಕು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆಗಸ್ಟ್ 27ರಂದು ಗುರುವಾರ ರಾತ್ರಿ 7.30ಕ್ಕೆ ಬಹು. ಅಸ್ಲಂ ಆಝ್‌ಹರಿ, ಆಗಸ್ಟ್ 28ರಂದು ಶುಕ್ರವಾರ ಬಹು. ಅಬ್ದುಲ್ ರಾಫಿ ಹಿಮಮಿ ಹಾಗೂ ಆಗಸ್ಟ್ 29ರಂದು ಶನಿವಾರ ಬಹು. ಉಸ್ತಾದ್ ರಫೀಕ್ ದಾರಿಮಿ ಅವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಆಗಸ್ಟ್ 29ರಂದು ರಾತ್ರಿ ಬಹು. ಸಯ್ಯದ್ ಝೈನುಲ್ ಆಬಿದ್ ತಂಙಳ್ ಅವರ ನೇತೃತ್ವದಲ್ಲಿ ಸ್ವಲಾತ್ ದುಆ ಮಜ್ಲಿಸ್ ನಡೆಯಲಿದೆ. ಇದೇ ದಿನ ಮಧ್ಯಾಹ್ನ ಬ್ಯಾಡಗೊಟ್ಟ ಮದ್ರಸ ಸಮೀಪದಿಂದ ಮೀಲಾದ್ ಸಂದೇಶ ಸಾರುವ ಕಾಲ್ನಡಿಗೆ ಜಾಥಾ ನಡೆಯಲಿದೆ.

ಆಗಸ್ಟ್ 30ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆವರೆಗೆ ಮದ್ರಸ ವಿದ್ಯಾರ್ಥಿಗಳಿಂದ ಮೀಲಾದ್ ಜಲ್ಸಾ ನಡೆಯಲಿದ್ದು, ಇದರ ಅಂಗವಾಗಿ ಅನ್ನದಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ವಿದ್ವಾಂಸರು ಹಾಗೂ ಮದ್ರಸ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಕುರಿತು ಮಸ್ಜಿದುನ್ನೂರ್ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ಸರ್ವರಿಗೂ ಆದರಣೀಯ ಸ್ವಾಗತ ಕೋರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW