ಬೈಬಲ್ ಸತ್ಯಗಳ ಆಳವಾದ ಅಧ್ಯಯನಕ್ಕೆ ವೇದಿಕೆ: ಬೆಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಕ್ಲಾಸ್


ಬೆಂಗಳೂರು: ಖ್ಯಾತ ವೇದಪಂಡಿತರು, ಬೈಬಲ್ ಅಧ್ಯಾಪಕರು ಹಾಗೂ ಹೀಬ್ರೂ ಭಾಷಾ ಪಂಡಿತರಾದ ಡಾ. ಬಾಬು ಜಾನ್ ವೇಟ್ಟಮಲ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ತ್ರಿದಿನ ಬೈಬಲ್ ಅಧ್ಯಯನ ತರಗತಿ ಆಯೋಜಿಸಲಾಗಿದೆ.

ಸಿಸ್ಟಮ್ಯಾಟಿಕ್ ಬೈಬಲ್ ಸ್ಟಡಿ (SBS) ಬೆಂಗಳೂರು ವತಿಯಿಂದ ಸೆಪ್ಟೆಂಬರ್ 7, 8 ಮತ್ತು 9ರಂದು ಕೊತ್ತನೂರಿನ ಎಬನೇಜರ್ ಆಡಿಟೋರಿಯಂನಲ್ಲಿ ಈ ಅಧ್ಯಯನ ಕಾರ್ಯಕ್ರಮ ನಡೆಯಲಿದೆ.

“ವೇದಶಾಸ್ತ್ರೀಯ ತಪ್ಪುಗಳು ಮತ್ತು ಕ್ರೈಸ್ತತ್ವದ ಕುಸಿತ” ಎಂಬ ವಿಷಯದ ಕುರಿತು ಅಧ್ಯಯನ ನಡೆಯಲಿದ್ದು, ಸೆಪ್ಟೆಂಬರ್ 7ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ತರಗತಿಗಳು ಸೆಪ್ಟೆಂಬರ್ 9ರಂದು ಸಂಜೆ 7 ಗಂಟೆಗೆ ಮುಕ್ತಾಯಗೊಳ್ಳಲಿವೆ.

ಬೈಬಲ್ ಸತ್ಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು, ವೇದಶಾಸ್ತ್ರೀಯ ತಪ್ಪುಗ್ರಹಿಕೆಗಳನ್ನು ಗುರುತಿಸುವುದು ಹಾಗೂ ಕ್ರೈಸ್ತ ನಂಬಿಕೆಯ ಮೂಲಭೂತ ಸತ್ಯಗಳನ್ನು ಮತ್ತಷ್ಟು ಆಳವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ವಿವಿಧ ವಿಷಯಗಳನ್ನು ತರಗತಿಯಲ್ಲಿ ವಿವರಿಸಲಾಗುವುದು.

ಬೈಬಲ್ ಶಿಕ್ಷಕರು, ಪಾಸ್ಟರ್‌ಗಳು, ಸಭಾ ಕಾರ್ಯಕರ್ತರು ಹಾಗೂ ದೇವರ ವಾಕ್ಯವನ್ನು ಆಳವಾಗಿ ಅಧ್ಯಯನ ಮಾಡಲು ಬಯಸುವವರು ಈ ತರಗತಿಯಲ್ಲಿ ಭಾಗವಹಿಸಬಹುದು. ನೋಂದಣಿ ಪ್ರಾರಂಭಗೊಂಡಿದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞 9916046008

📞 7899632468

📞 9972560705

📞 9880465225

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW