ಸಾಂದರ್ಭಿಕ ಚಿತ್ರ
ನವದೆಹಲಿ: ಮಧ್ಯಪ್ರಾಚ್ಯ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷಗಳು ಮತ್ತು ಯುದ್ಧಗಳು ಮಕ್ಕಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯಕ್ಕೆ ಗಂಭೀರ ಅಡ್ಡಿಯಾಗುತ್ತಿವೆ ಎಂದು UNICEF ತಿಳಿಸಿದೆ.
ಸಂಸ್ಥೆಯ ಸಾರಿಗೆ ನಿರ್ವಹಣಾ ವಿಭಾಗದ ಮುಖ್ಯಸ್ಥ ಶಾನ್ ಸೆಡ್ರಿಕ್ ಮೀಯೂಸ್ ಅವರ ಪ್ರಕಾರ, ಸಾರಿಗೆ ವೆಚ್ಚಗಳು ಹೆಚ್ಚುತ್ತಿರುವುದರಿಂದ ಮಕ್ಕಳ ನೆರವು ಸಾಮಗ್ರಿಗಳನ್ನು ತಲುಪಿಸಲು ಲಭ್ಯವಿರುವ ನಿಧಿಗಳು ಕಡಿಮೆಯಾಗುತ್ತಿವೆ. ಇದರಿಂದ ಮಾನವೀಯ ನೆರವು ಕಾರ್ಯಾಚರಣೆಗಳು ಸವಾಲುಗಳನ್ನು ಎದುರಿಸುತ್ತಿವೆ.
ಸಮುದ್ರ ಮಾರ್ಗದ ಸಾರಿಗೆಯಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ವಿಳಂಬಗಳು ದೊಡ್ಡ ಮಾನವೀಯ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಯುನಿಸೆಫ್ ಎಚ್ಚರಿಸಿದೆ. ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಹಾಗೂ ಸಾರಿಗೆ ಕ್ಷೇತ್ರದಲ್ಲಿನ ವಿಳಂಬಗಳು ಜಾಗತಿಕ ಮಟ್ಟದಲ್ಲಿ ಮಕ್ಕಳಿಗೆ ಅಗತ್ಯವಿರುವ ನೆರವು ಮತ್ತು ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದನ್ನು ಗಂಭೀರವಾಗಿ ಬಾಧಿಸುತ್ತಿವೆ ಎಂದು ಮೀಯೂಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
