ಪ್ರಾರ್ಥನೆ–ವಾಕ್ಯ–ಉಜ್ಜೀವನ: ನೀಲವಾಗಿಲಿನಲ್ಲಿ ವಿಶೇಷ ಕೂಟ


ಹುಣಸೂರು:
ತಾಲೂಕಿನ ನೀಲವಾಗಿಲು ಗ್ರಾಮದ ಹನಗೋಡು  ರಸ್ತೆಯಲ್ಲಿರುವ ಶಾಲೋಮ್ ಪ್ರಾರ್ಥನಾ ಮಂದಿರದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ಎರಡು ದಿನಗಳ ಉಜ್ಜೀವನ ಕೂಟ (Revival Meeting) ಆಯೋಜಿಸಲಾಗಿದೆ.

ಸೆಪ್ಟೆಂಬರ್ 12ರಂದು ಶನಿವಾರ ಹಾಗೂ 13ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕೂಟದಲ್ಲಿ ಮುಂಬೈಯ ಪ್ರವಾದಿ ಪಾಸ್ಟರ್ ವಿಲ್ಸನ್ ಫೆರ್ನಾಂಡಿಸ್ ಅವರು ವಿಶೇಷ ಸಂದೇಶ ನೀಡಲಿದ್ದಾರೆ.

ಆಧ್ಯಾತ್ಮಿಕ ಉಜ್ಜೀವನ, ಪ್ರಾರ್ಥನೆ ಹಾಗೂ ದೇವರ ವಾಕ್ಯದ ಮೂಲಕ ವಿಶ್ವಾಸಿಗಳನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೂಟದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರಾದ ಪಾಸ್ಟರ್ ಲಕ್ಷ್ಮಣ್ ಮನವಿ ಮಾಡಿದ್ದಾರೆ.

ಶಾಲೋಮ್ ಪ್ರಾರ್ಥನಾ ಮಂದಿರದ ಪಾಸ್ಟರ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ನೀಲವಾಗಿಲು, ಹನಗೋಡು ರಸ್ತೆ, ಹುಣಸೂರು ತಾಲೂಕು, ಮೈಸೂರು ಜಿಲ್ಲೆಯಲ್ಲಿ ನಡೆಯಲಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW