ಕೊಡ್ಲಿಪೇಟೆ: ಕರ್ನಾಟಕ ಪೆಂತೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ (KPCA) ವತಿಯಿಂದ “Revive Coorg for Christ” ಎಂಬ ಧ್ಯೇಯದೊಂದಿಗೆ ವಿಶೇಷ ಮಿಷನ್ ಲೀಡರ್ಸ್ ಮೀಟ್ ಕಾರ್ಯಕ್ರಮವನ್ನು ಜೂನ್ 13ರಂದು ಕೊಣನೂರಿನ ಜೆಹೋವ ನಿಸ್ಸಿ ಎಜಿ ಚರ್ಚ್ನಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಗಾಸ್ಪೆಲ್ ವಾಯ್ಸ್ ಜೊತೆ ಮಾತನಾಡಿದ ಕರ್ನಾಟಕ ಪೆಂತೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ (KPCA) ಅಧ್ಯಕ್ಷ ಅಬ್ರಾಹಂ ಕೊಶಿ ಅವರು, “ಕೊಡಗು ಹಾಗೂ ನೆರೆ ಜಿಲ್ಲೆಗಳಲ್ಲಿ ಆತ್ಮಿಕ ಜಾಗೃತಿ ಮೂಡಿಸುವುದು, ಸುವಾರ್ತೆ ಪ್ರಸಾರ ಕಾರ್ಯವನ್ನು ಬಲಪಡಿಸುವುದು ಹಾಗೂ ವಿವಿಧ ಸಭೆಗಳ ನಡುವಿನ ಐಕ್ಯತೆಯನ್ನು ವೃದ್ಧಿಸುವ ಉದ್ದೇಶದಿಂದ ಈ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಪಾಸ್ಟರ್‌ಗಳು, ಸುವಾರ್ತಿಕರು, ಮಿಷನ್ ನಾಯಕರು ಹಾಗೂ ಕ್ರೈಸ್ತ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಿಕವಾಗಿ ಬಲಗೊಳ್ಳುವಂತೆ ಆಹ್ವಾನಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) ರವೀಂದ್ರ ಹೊಸಮನಿ ಉದ್ಘಾಟಿಸಲಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನೈತಿಕ ಮೌಲ್ಯಗಳ ಮಹತ್ವದ ಕುರಿತು ಸಂದೇಶ ನೀಡಲಿದ್ದಾರೆ.
ಸಭೆಯಲ್ಲಿ ಪ್ರಮುಖ ವಕ್ತಾರರಾಗಿ ಜೋಬಿ ವರ್ಗೀಸ್ ಹಾಗೂ ಬೆಂಜಮಿನ್ ಚಾಕೊ ಭಾಗವಹಿಸಿ ದೇವರ ವಾಕ್ಯವನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮವು ಜೂನ್ 13ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ.
Empowering Apostolic and Prophetic Generation ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ ವಿವಿಧ ಭಾಗಗಳಿಂದ ಪಾಸ್ಟರ್‌ಗಳು, ಚರ್ಚ್ ನಾಯಕರು, ಸುವಾರ್ತಿಕರು ಹಾಗೂ ಮಿಷನ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಸಭೆಯು ಕ್ರೈಸ್ತ ನಾಯಕತ್ವವನ್ನು ಬಲಪಡಿಸುವುದರ ಜೊತೆಗೆ, ಪ್ರದೇಶದಲ್ಲಿ ಆತ್ಮಿಕ ಪುನರುಜ್ಜೀವನ ಮತ್ತು ಸುವಾರ್ತೆ ಕಾರ್ಯಗಳಿಗೆ ಹೊಸ ಉತ್ತೇಜನ ನೀಡುವ ವೇದಿಕೆಯಾಗಲಿದೆ ಎಂದು ಪಾಸ್ಟರ್: ಫ್ರೆಡ್ಡಿ ಪಿ ಸಿ ತಿಳಿಸಿದ್ದಾರೆ.
– ಗಾಸ್ಪೆಲ್ ವಾಯ್ಸ್ ವರದಿ
