ಅಮೆರಿಕಾ : ಹಿಂಸೆಗಳನ್ನು ಎದುರಿಸುತ್ತಿರುವ ವಿಶ್ವಾಸಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ವಿವಿಧ ಕ್ರೈಸ್ತ ಸಂಘಟನೆಗಳ ನಾಯಕರು ಹೊಸ ಪ್ರಾರ್ಥನಾ ಒಕ್ಕೂಟಕ್ಕೆ ಚಾಲನೆ ನೀಡಿದ್ದಾರೆ. ಸಂಘಟನೆಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಈ ಮಹತ್ವದ ನಿರ್ಧಾರದ ಮುಖ್ಯ ಗುರಿಯಾಗಿದೆ. ದೀರ್ಘಕಾಲ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿದ್ದ ಸಂಘಟನೆಗಳು ಈಗ ಒಂದಾಗಿ ಬರುತ್ತಿರುವುದು ಹಿಂಸೆಗೆ ಒಳಗಾದ ವಿಶ್ವಾಸಿಗಳಿಗೆ ದೊಡ್ಡ ಆಶಾಕಿರಣವಾಗಿದೆ.
ಇಂಟರ್ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್ (ICC) ಅಧ್ಯಕ್ಷ ಶಾನ್ ರೈಟ್ ಅವರು ಈ ಮುಂದಾಳತ್ವವನ್ನು ವಹಿಸಿದ್ದಾರೆ. ರಿಲಿಜಿಯಸ್ ಲಿಬರ್ಟಿ ಪಾರ್ಟ್ನರ್‌ಶಿಪ್ (RLP) ವಾರ್ಷಿಕ ಸಭೆಯಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಲೋಕದಾದ್ಯಂತ ಸುಮಾರು 388 ಮಿಲಿಯನ್ ವಿಶ್ವಾಸಿಗಳು ಹಿಂಸೆ ಅನುಭವಿಸುತ್ತಿರುವ ಹಿನ್ನೆಲೆ, ಇಂತಹ ಒಕ್ಕೂಟದ ಅಗತ್ಯತೆ ಬಹಳ ಮಹತ್ವ ಪಡೆದುಕೊಂಡಿದೆ.
ಏಪ್ರಿಲ್ 27 ರಂದು ಒಂಬತ್ತು ಸಂಘಟನೆಗಳ ಸಿಇಒಗಳು ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿ, ಹಿಂಸೆಗೆ ಒಳಗಾದ ವಿಶ್ವಾಸಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು.
