![]() |
| ಸಾಂದರ್ಭಿಕ ಚಿತ್ರ |
ಬಲರಾಮ್ ಎಂಬ ವ್ಯಕ್ತಿ, ಅವರ ಪತ್ನಿ ಹಾಗೂ ಮಗನಿಗೆ ಗ್ರಾಮದಲ್ಲಿನ ಕೆಲವರು ಸೇರಿ ಚಪ್ಪಲಿ ಹಾರ ಹಾಕಿಸಿ ಗ್ರಾಮದಲ್ಲಿ ನಡೆಸಿದರೆಂದು ಆರೋಪಿಸಲಾಗಿದೆ. ಈ ಅಮಾನವೀಯ ಕೃತ್ಯಕ್ಕೆ ಅವರದೇ ತಂದೆ ಹಾಗೂ ಸಹೋದರರು ಸಹ ಬೆಂಬಲ ನೀಡಿದರೆಂಬುದು ಘಟನೆಗೆ ಇನ್ನಷ್ಟು ಗಂಭೀರತೆ ತಂದಿದೆ.
“ಧರ್ಮ ಬದಲಾಯಿಸದಿದ್ದರೆ ಗ್ರಾಮದಲ್ಲಿ ಇರಲು ಅವಕಾಶ ನೀಡುವುದಿಲ್ಲ, ಸಾಮಾಜಿಕವಾಗಿ ಬಹಿಷ್ಕರಿಸುತ್ತೇವೆ” ಎಂಬ ಬೆದರಿಕೆ ನೀಡಲಾಗಿದೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಸಭೆ ನಡೆಸಿ ಈ ಕೃತ್ಯವನ್ನು ಯೋಜಿತವಾಗಿ ಮಾಡಿದರೆಂದು ತಿಳಿದುಬಂದಿದೆ.
ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವಿಷಯ ಬಹಿರಂಗವಾಗಿದೆ. ಮಾಹಿತಿ ಪಡೆದ ಮೂರಸಾನ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಲರಾಮ್ ಅವರ ತಂದೆ ಮತ್ತು ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸಂವಿಧಾನ ಮತ್ತು ಕಾನೂನನ್ನು ಲೆಕ್ಕಿಸದೇ ಗ್ರಾಮದಲ್ಲಿ ಸ್ವಂತ ನಿಯಮಗಳನ್ನು ಜಾರಿಗೆ ತರಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
