ಏಷ್ಯಾದಲ್ಲಿ ಕ್ರೈಸ್ತ ಸಭೆಗಳ ಐಕ್ಯತೆ ಬಲಪಡಿಸಲು ಕರೆ; ಥೈಲ್ಯಾಂಡ್‌ನ ಎಕ್ಯುಮೆನಿಕಲ್ ಸಮ್ಮೇಳನದಲ್ಲಿ ಆರ್ಚ್‌ಬಿಷಪ್ ಫೆಲಿಕ್ಸ್ ಮಚಾಡೊ ಅವರ ಸಂದೇಶ

ಥೈಲ್ಯಾಂಡ್: ಕ್ರೈಸ್ತ ಸಭೆಗಳ ನಡುವಿನ ಸಂವಾದ ಮತ್ತು ಪರಸ್ಪರ ಸಹಕಾರವನ್ನು ಇನ್ನಷ್ಟು ಗಾಢಗೊಳಿಸುವ ಮೂಲಕ ಕ್ರೈಸ್ತ ಐಕ್ಯತೆಯನ್ನು ಬಲಪಡಿಸಬೇಕೆಂದು ಥೈಲ್ಯಾಂಡ್‌ನಲ್ಲಿ ನಡೆದ ಪ್ರಮುಖ ಎಕ್ಯುಮೆನಿಕಲ್ ಸಮ್ಮೇಳನದಲ್ಲಿ ಧಾರ್ಮಿಕ ನಾಯಕರಿಗೆ ಕರೆ ನೀಡಲಾಗಿದೆ.

ಫೆಡರೇಷನ್ ಆಫ್ ಏಷಿಯನ್ ಬಿಷಪ್ಸ್ ಕಾನ್ಫರೆನ್ಸಸ್‌ನ ಎಕ್ಯುಮೆನಿಕಲ್ ಮತ್ತು ಅಂತರಧರ್ಮೀಯ ವ್ಯವಹಾರಗಳ ಆಯೋಗದ ಅಧ್ಯಕ್ಷರೂ, ಭಾರತದ ಮಾಜಿ ಆರ್ಚ್‌ಬಿಷಪ್ ಆಗಿರುವ   ಫೆಲಿಕ್ಸ್ ಆಂಟೋನಿ ಮಚಾಡೊ ಅವರು, ಸೈನೋಡಲ್ ಸ್ವಭಾವ (Synodality) ಮತ್ತು ಕ್ರೈಸ್ತ ಐಕ್ಯತೆಯ ಪ್ರಯತ್ನಗಳು ಪರಸ್ಪರ ಆಳವಾಗಿ ಸಂಬಂಧ ಹೊಂದಿದ್ದು, ಅವುಗಳನ್ನು ಚರ್ಚಿನ ಸಾಮೂಹಿಕ ಧ್ಯೇಯದ ಭಾಗವಾಗಿ ಪರಿಗಣಿಸಬೇಕೆಂದು ಪ್ರತಿನಿಧಿಗಳಿಗೆ ತಿಳಿಸಿದರು.

ಮೇ 31ರಿಂದ ಜೂನ್ 3ರವರೆಗೆ ಥೈಲ್ಯಾಂಡ್‌ನ ಚಿಯಾಂಗ್ ಮೈ  ನಗರದ ಪಯಾಪ್ ವಿಶ್ವವಿದ್ಯಾಲಯದಲ್ಲಿ ಯಲ್ಲಿ ನಡೆದ ಈ ಸಮ್ಮೇಳನವನ್ನು ಕ್ರಿಶ್ಚಿಯನ್ ಕಾನ್ಫರೆನ್ಸ್ ಆಫ್ ಏಷಿಯಾ  ಆಯೋಜಿಸಿತ್ತು.

ಸಮ್ಮೇಳನದಲ್ಲಿ ಮಾತನಾಡಿದ ಅವರು, ಕ್ಯಾಥೋಲಿಕ್ ಚರ್ಚಿನಲ್ಲಿ ಪ್ರಸ್ತುತ ನಡೆಯುತ್ತಿರುವ ‘ಸಿನೋಡ್ ಆನ್ ಸಿನೋಡಾಲಿಟಿ’ ವಿಶ್ವಾಸದಲ್ಲಿ ಒಟ್ಟಾಗಿ ಸಾಗುವ ಮಹತ್ವವನ್ನು ಒತ್ತಿಹೇಳುತ್ತಿದ್ದು, ಈ ಪ್ರಕ್ರಿಯೆಯು ಕ್ರೈಸ್ತ ಐಕ್ಯತೆಯ ಮಹತ್ತರ ಗುರಿಯನ್ನು ಸಹಜವಾಗಿಯೇ ಬೆಂಬಲಿಸುತ್ತಿದೆ ಎಂದು ಹೇಳಿದರು.

ದೀಕ್ಷಾಸ್ನಾನದ ಮೂಲಕ ದೊರೆತಿರುವ ಸಾಮಾನ್ಯ ಕ್ರೈಸ್ತ ಗುರುತಿನಿಂದಲೇ ಸೈನೋಡಲ್ ಸ್ವಭಾವ ಮತ್ತು ಚರ್ಚ್ ಐಕ್ಯತೆ ಬೆಳೆಯುತ್ತವೆ. ಈ ಸಾಮಾನ್ಯ ಅಡಿಪಾಯದ ಕಾರಣದಿಂದ ಪ್ರಾರ್ಥನೆ, ಚಿಂತನೆ ಹಾಗೂ ಸುವಾರ್ತಾ ಸೇವೆಯಲ್ಲಿ ಕ್ರೈಸ್ತ ಸಭೆಗಳು ಇನ್ನಷ್ಟು ಸಮೀಪವಾಗಿ ಸಹಕರಿಸಬೇಕಾದ ಹೊಣೆಗಾರಿಕೆ ಹೊಂದಿವೆ ಎಂದು ಅವರು ವಿವರಿಸಿದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW