ಆರ್ಚ್‌ಬಿಷಪ್ ಬೆರ್ನಾರ್ಡ್ ಮೊರಾಸ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ


ಬೆಂಗಳೂರು: ನಗರದ ಫೆಡರೇಷನ್ ಆಫ್ ಕೊಂಕಣಿ ಕ್ಯಾಥೋಲಿಕ್ ಅಸೋಸಿಯೇಷನ್ಸ್ (ಎಫ್‌ಕೆಸಿಎ) ವತಿಯಿಂದ ಬೆಂಗಳೂರು ಮಹಾಧರ್ಮಪ್ರಾಂತ್ಯದ ನಿವೃತ್ತ ಆರ್ಚ್‌ಬಿಷಪ್ ಆಗಿರುವ ಬರ್ನಾಡ್ ಬ್ಲ್ಯಾಸಿಸ್ ಮೊರಾಸ್  ಅವರಿಗೆ "ಜೀವಮಾನ ಸಾಧನೆ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಸಮಾಜ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಂಬಿಕೆ, ವಿನಯ ಮತ್ತು ಕರುಣೆಯ ಮೂಲಕ ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಆರ್ಚ್‌ಬಿಷಪ್ ಮೊರಾಸ್ ಅವರ ಸೇವಾ ಜೀವನವು ಅನೇಕರಿಗೆ ಪ್ರೇರಣೆಯಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ಫೆಡರೇಷನ್‌ನ 28ನೇ ವಾರ್ಷಿಕೋತ್ಸವದ ಅಂಗವಾಗಿ ಜೂನ್ 21ರಂದು ಬೆಂಗಳೂರಿನ ಸೇಂಟ್ ಜೋಸೆಪ್ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಆರ್ಚ್‌ಬಿಷಪ್ ಮೊರಾಸ್ ಅವರು, ಈ ಗೌರವವನ್ನು ತಮ್ಮೊಂದಿಗೆ ಸೇವೆ ಸಲ್ಲಿಸಿದ ಎಲ್ಲರಿಗೂ ಅರ್ಪಿಸುತ್ತಿರುವುದಾಗಿ ತಿಳಿಸಿ, ಸಮಾಜದ ಒಳಿತಿಗಾಗಿ ಮುಂದುವರಿದು ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW