ಪೈರೇಟ್ಸ್ ಕೋವ್ ನಲ್ಲಿ: ಕಳೆದ ಶನಿವಾರ ನಡೆದ ಕ್ರೈಸ್ತರ ಮಹಾ ಸಮಾವೇಶದಲ್ಲಿ ನೂರಾರು ಮಂದಿ ಸಮುದ್ರದಲ್ಲಿ ಇಳಿದು ದೀಕ್ಷಾಸ್ನಾನ ಸ್ವೀಕರಿಸಿದರು. “Baptize California” ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, Jesus Christ ಮೇಲಿನ ತಮ್ಮ ನಂಬಿಕೆಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದರು.
ಕಾರ್ಯಕ್ರಮದಲ್ಲಿ ಟಿಫಾನಿ ಹಡ್ಸನ್, ಆಬಿ ಗಾಂಬೋವಾ, ಮ್ಯಾಟ್ ಕ್ರೋಕರ್ ಹಾಗೂ ಓಷನ್ಸ್ ಮ್ಯೂಸಿಕ್ ತಂಡಗಳ ನೇರ ಆರಾಧನಾ ಕಾರ್ಯಕ್ರಮಗಳು ನಡೆಯಿತು. ಸಮುದ್ರತೀರವೇ ಆರಾಧನೆ ಮತ್ತು ಪ್ರಾರ್ಥನೆಯ ವಾತಾವರಣದಿಂದ ಕಂಗೊಳಿಸಿತು.
ಈ ಮಹಾ ಸಮಾವೇಶವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಆತ್ಮೀಯ ಪರಿವರ್ತನೆಯ ಸಾಕ್ಷಿಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. “JESUS IS KING” ಎಂಬ ಘೋಷಣೆಗಳ ನಡುವೆ ನಡೆದ ದೀಕ್ಷಾಸ್ನಾನ ಕಾರ್ಯಕ್ರಮವು ನಂಬಿಕೆಯ ಹೊಸ ಜಾಗೃತಿಗೆ ಸಂಕೇತವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.