ಪವಿತ್ರ ಭೂಮಿಗೆ ಅಧಿಕೃತ ಆಹ್ವಾನ; ಪಾಸ್ಟರ್‌ಗಳು ಮತ್ತು ಯುವ ಮಿಷನರಿಗಳಿಗೆ ಇಸ್ರೇಲ್‌ನ ಮಹತ್ವದ ಯೋಜನೆ


 ಜೆರುಸಲೇಮ್: ವಿಶ್ವದಾದ್ಯಂತದ ಕ್ರೈಸ್ತ ಸಮುದಾಯದೊಂದಿಗೆ ಇನ್ನಷ್ಟು ನಿಕಟ ಸಂಪರ್ಕ ಬೆಳೆಸುವ ಉದ್ದೇಶದಿಂದ ಇಸ್ರೇಲ್ ಸರ್ಕಾರ ಹೊಸ ಯೋಜನೆಯನ್ನು ಆರಂಭಿಸಿದೆ. ಚರ್ಚ್‌ಗಳ ಪಾಸ್ಟರ್‌ಗಳು, ಯುವ ನಾಯಕರು ಹಾಗೂ ಮಿಷನರಿಗಳನ್ನು ಪವಿತ್ರ ಭೂಮಿಗೆ ಅಧಿಕೃತವಾಗಿ ಆಹ್ವಾನಿಸುವ ಯೋಜನೆಯನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯ ಘೋಷಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಸುಮಾರು 8,000ಕ್ಕೂ ಹೆಚ್ಚು ಕ್ರೈಸ್ತ ನಾಯಕರನ್ನು ಆತಿಥ್ಯವಾಗಿ ಇಸ್ರೇಲ್‌ಗೆ ಕರೆತರಲು ಯೋಜಿಸಲಾಗಿದೆ.

ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‌ನೆಟ್ ಮೂಲಕ ಇಸ್ರೇಲ್ ಬಗ್ಗೆ ಹಲವಾರು ರೀತಿಯ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ನೈಜ ಪರಿಸ್ಥಿತಿಯನ್ನು ನೇರವಾಗಿ ತೋರಿಸುವುದೇ ಈ ಕಾರ್ಯಕ್ರಮದ ಉದ್ದೇಶವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ವಿವಿಧ ಚರ್ಚ್‌ಗಳೊಂದಿಗೆ ಸಂಪರ್ಕ ಸಾಧಿಸಲು ವಿಶೇಷ ಅಧಿಕಾರಿಯನ್ನೂ ನೇಮಿಸಲಾಗಿದೆ.

ಎಂಟು ದಿನಗಳ ಈ ವಿಶೇಷ ಪ್ರವಾಸದಲ್ಲಿ ಬೈಬಲ್‌ನಲ್ಲಿ ಉಲ್ಲೇಖವಾಗಿರುವ ಪವಿತ್ರ ಸ್ಥಳಗಳ ಭೇಟಿ ಮಾತ್ರವಲ್ಲದೆ, ಇಸ್ರೇಲ್‌ನ ಇಂದಿನ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳ ಕುರಿತು ವಿಶೇಷ ತರಗತಿಗಳನ್ನೂ ನಡೆಸಲಾಗುತ್ತದೆ. ಕಳೆದ ವರ್ಷ ಹಲವು ಕ್ರೈಸ್ತ ಸಂಘಟನೆಗಳ ಭೇಟಿಯಿಂದ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆ ಇದೀಗ ಪಾಸ್ಟರ್‌ಗಳು ಮತ್ತು ಯುವ ಮಿಷನರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಆತ್ಮೀಯ ಅನುಭವದ ಜೊತೆಗೆ ಇಸ್ರೇಲ್‌ನೊಂದಿಗೆ ಸ್ನೇಹಪೂರ್ಣ ಸಂಬಂಧಗಳನ್ನು ಬಲಪಡಿಸುವುದಕ್ಕೂ ಈ ಯೋಜನೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW