ಹುಣಸೂರಿನಲ್ಲಿ ಸಮರ್ ಮ್ಯೂಸಿಕ್ ಕ್ಯಾಂಪ್ ಆಯೋಜನೆ



ಹುಣಸೂರು: ಸಂಗೀತಾಭಿಮಾನಿಗಳು ಹಾಗೂ ಯುವ ಪ್ರತಿಭೆಗಳಿಗಾಗಿ ಹಾರ್ಪ್ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ಹುಣಸೂರಿನಲ್ಲಿ ಸಮರ್ ಮ್ಯೂಸಿಕ್ ಕ್ಯಾಂಪ್ ಆಯೋಜಿಸಲಾಗಿದೆ.

ಏಪ್ರಿಲ್ 6 ರಿಂದ 11ರವರೆಗೆ ನಡೆಯುವ ಈ ಶಿಬಿರದಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ತರಗತಿಗಳು ನಡೆಯಲಿವೆ. ಮೂಲ ಹಾಗೂ ಮಧ್ಯಂತರ ಮಟ್ಟದ ಸಂಗೀತ ಕಲಿಕೆಯನ್ನು ಒಳಗೊಂಡ ಈ ಶಿಬಿರದಲ್ಲಿ ಕೀಬೋರ್ಡ್, ಗಿಟಾರ್ ಮತ್ತು ಡ್ರಮ್ ವಾದ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ. 32 ವರ್ಷಗಳ ಅನುಭವ ಹೊಂದಿರುವ ಟ್ರಿನಿಟಿ ಸಂಗೀತ ಶಾಲೆಯಲ್ಲಿ 8ನೇ ಗ್ರೇಡ್ ಪಡೆದಿರುವ ಬ್ರದರ್ ಸಂತೋಷ್ ಕೆ (ಬೆಂಗಳೂರು) ಅವರಿಂದ ತರಬೇತಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಶಿಬಿರದ ಶುಲ್ಕ ರೂ.1999/- ಆಗಿದ್ದು, ಸಂಗೀತದಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಸೇವೆಯಲ್ಲಿ ತೊಡಗಿಸಿಕೊಳ್ಳಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಶಿಬಿರದ ಪ್ರಮುಖ ಉದ್ದೇಶ ದೇವರ ರಾಜ್ಯಕ್ಕಾಗಿ ಸೇವೆ ಮಾಡುವ ಮನೋಭಾವ ಬೆಳೆಸುವುದು ಹಾಗೂ ಸಭೆ ಮತ್ತು ಸೇವಕರಿಗೆ ಉಪಯೋಗವಾಗುವ ರೀತಿಯಲ್ಲಿ ಪ್ರತಿಭೆಯನ್ನು ವೃದ್ಧಿಸುವುದಾಗಿದೆ.

ಭಾಗವಹಿಸುವವರು ತಮ್ಮ ಬೈಬಲ್, ವಾದ್ಯಯಂತ್ರಗಳು (ಕೀಬೋರ್ಡ್, ಗಿಟಾರ್, ಡ್ರಮ್ ಪ್ಯಾಡ್), ಹೆಡ್‌ಫೋನ್, ಸಂಗೀತ ಪುಸ್ತಕಗಳು ಹಾಗೂ ಅಗತ್ಯ ವಸ್ತುಗಳನ್ನು ತರಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ಇ-ಫಾರ್ಮ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಪೂರ್ಣಗೊಳಿಸಬೇಕಾಗಿದೆ

ಶಿಬಿರವು ಇಟರ್ನಲ್ ಹೋಪ್ ಎಜಿ ಚರ್ಚ್, ಕಟ್ಟೆಮಲಳವಾಡಿಯಲ್ಲಿ ನಡೆಯಲಿದ್ದು, ಭಾಗವಹಿಸುವವರಿಗೆ ಮಧ್ಯಾಹ್ನದ ಊಟ ಹಾಗೂ ಟೀ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬ್ರದರ್ ಸಂತೋಷ್ ಕೆ (ಬೆಂಗಳೂರು) – 9535583897, ಪಾಸ್ಟರ್ ವೆಂಕಟೇಶ್ – 9845551399, ಪಾಸ್ಟರ್ ಎಲಿಷ್ ಗಂಗಾಧರ್ – 9986548589 ಹಾಗೂ ಪಾಸ್ಟರ್ ಸುರೇಶ್ (ಮಂಜು) – 6362944974 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ