ಸೇವಕರ ಐಕ್ಯ ಪ್ರಾರ್ಥನೆಗೆ ಸಾಕ್ಷಿಯಾದ ಕೊಡ್ಲಿಪೇಟೆ – ಐಪಿಸಿ ಚರ್ಚ್ ನಲ್ಲಿ ಆತ್ಮೀಯ ಜಾಗೃತಿ



ಕೊಡ್ಲಿಪೇಟೆ: ಐಪಿಸಿ ಚರ್ಚ್ ಕೊಡ್ಲಿಪೇಟೆಯಲ್ಲಿ ಸೇವಕರ ವಿಶೇಷ ಸಭೆ ಆತ್ಮೀಯ ಉತ್ಸಾಹ ಹಾಗೂ ದೇವರ ಸನ್ನಿಧಿಯಲ್ಲಿ ಆಯೋಜಿಸಲಾಯಿತು. ವಿವಿಧ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವರ ಸೇವಕರುಗಳು ಭಾಗವಹಿಸಿದ ಈ ಸಭೆ ಆತ್ಮೀಯ ಐಕ್ಯತೆ ಮತ್ತು ಸಹವಾಸದ ಸುಂದರ ಕ್ಷಣವಾಗಿ ಪರಿಣಮಿಸಿತು.

ಸಭೆಗೆ ಪಾಸ್ಟರ್ ಜೋಶುವ ಅಧ್ಯಕ್ಷತೆ ವಹಿಸಿದರು. ಆರಂಭದಲ್ಲಿ ಪಾಸ್ಟರ್ ರಾಜನ್ ಆತ್ಮೀಯ ಆರಾಧನೆಗೆ ನೇತೃತ್ವ ನೀಡಿದರು. ನಂತರ ವಿವಿಧ ಪ್ರದೇಶಗಳ ಸೇವಕರು ತಮ್ಮ ಸೇವಾ ಕ್ಷೇತ್ರಗಳ ಅನುಭವಗಳನ್ನು ಮತ್ತು ಮಾಹಿತಿಗಳನ್ನು ಹಂಚಿಕೊಂಡರು. ಇದರಿಂದ ಪರಸ್ಪರ ಉತ್ತೇಜನ ಹಾಗೂ ಸಹಕಾರದ ಮನೋಭಾವ ಬಲವತ್ತಾಯಿತು.

ಸಭೆಯ ಮುಖ್ಯ ಘಟ್ಟವಾಗಿ ಎಲ್ಲಾ ಸೇವಕರು ಒಂದಾಗಿ ಸೇರಿ ಹೃತ್ಪೂರ್ವಕವಾಗಿ ಪ್ರಾರ್ಥನೆ ಮಾಡಿ ದೇವರ ಸನ್ನಿಧಿಯನ್ನು ಅನುಭವಿಸಿದರು. ಇದು ಆತ್ಮೀಯ ನವೀಕರಣ ಮತ್ತು ಸಮರ್ಪಣೆಗೆ ಅವಕಾಶ ಕಲ್ಪಿಸಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಪಿಸಿ ಕರಿಷ್ಮ ಸೆಂಟರ್ ಪಾಸ್ಟರ್ ಹಾಗೂ ಐಪಿಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಕೆ.ವಿ. ಜೋಸ್ ಅವರು ದೇವರ ವಾಕ್ಯದ ಆಧಾರದ ಮೇಲೆ ಪ್ರೇರಣಾದಾಯಕ ಸಂದೇಶ ನೀಡಿದರು. ವಿಶ್ವಾಸದಲ್ಲಿ ದೃಢವಾಗಿ ನಿಲ್ಲಬೇಕು, ಐಕ್ಯತೆಯಿಂದ ಕಾರ್ಯನಿರ್ವಹಿಸಬೇಕು ಮತ್ತು ದೇವರ ಕೃಪೆಯನ್ನು ಅನುಭವಿಸುವ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು.

ಕೊನೆಯಲ್ಲಿ ಪಾಸ್ಟರ್ ಅಬ್ರಹಾಂ ಕೋಶಿ ಸಮಾಪನ ಪ್ರಾರ್ಥನೆ ನೆರವೇರಿಸಿ ಅಂತಿಮ ಆಶೀರ್ವಾದ ನೀಡಿದರು.

ಈ ಸೇವಕರ ಸಭೆ ಆತ್ಮೀಯ ಬಲವರ್ಧನೆಗೂ ಐಕ್ಯತೆಗೆಗೂ ಹಾಗೂ ಭವಿಷ್ಯದ ಸೇವಾ ಕಾರ್ಯಗಳಿಗೆ ಹೊಸ ಉತ್ಸಾಹವನ್ನು ನೀಡುವಂತಾಯಿತು.

ವರದಿ: ಪಾ. ಫ್ರೆಡ್ಡಿ ಕೂರ್ಗ್