ಕೊಡ್ಲಿಪೇಟೆ, ಮಾ. 24: ಆತ್ಮಿಕ ಉಜ್ಜೀವನ ಹಾಗೂ ಸೇವಕರ ಶಕ್ತೀಕರಣದ ಉದ್ದೇಶದಿಂದ ಐಪಿಸಿ ಚರ್ಚ್ ಕೊಡ್ಲಿಪೇಟೆ ವತಿಯಿಂದ ಏಪ್ರಿಲ್ 11ರಂದು ವಿಶೇಷ ಸೇವಕರ ಸಮ್ಮೇಳನ ಹಾಗೂ ಉಜ್ಜೀವನ ಕೂಟವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಈ ಸಮ್ಮೇಳನವು ಸೇವಕರ ಆತ್ಮೀಯ ಬೆಳವಣಿಗೆಗೆ ದಿಕ್ಕು ತೋರಿಸುವುದರ ಜೊತೆಗೆ, ಕರ್ತವ್ಯದ ಸ್ಪಷ್ಟ ಅರಿವು ಹಾಗೂ ದೇವರ ವಾಕ್ಯದ ಮೂಲಕ ಹೊಸ ದೃಷ್ಟಿಕೋನವನ್ನು ನೀಡುವ ಮಹತ್ವದ ವೇದಿಕೆಯಾಗಿ ಪರಿಣಮಿಸಲಿದೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಸೇವಕರ ಸಮ್ಮೇಳನದಲ್ಲಿ ದೇವರ ಸೇವೆಯಲ್ಲಿ ತೊಡಗಿರುವವರಿಗೆ ಉತ್ತೇಜನ ಹಾಗೂ ಶಕ್ತೀಕರಣ ನೀಡುವ ಆತ್ಮೀಯ ಸಂದೇಶಗಳು ನೀಡಲಾಗಲಿವೆ.
ಸಂಜೆ 6 ಗಂಟೆಯಿಂದ ರಾತ್ರಿ 9.30 ಗಂಟೆಯವರೆಗೆ ನಡೆಯುವ ಉಜ್ಜೀವನ ಕೂಟವು ದೇವರ ಸನ್ನಿಧಿಯಲ್ಲಿ ಆರಾಧನೆ, ಪ್ರಾರ್ಥನೆ ಮತ್ತು ವಾಕ್ಯದ ಮೂಲಕ ಭಕ್ತರಲ್ಲಿ ಆತ್ಮಿಕ ಜಾಗೃತಿ ಮೂಡಿಸಿ, ಜೀವನದಲ್ಲಿ ಹೊಸ ಆಶಾಭರವನ್ನೂ ಉಂಟುಮಾಡಲಿದೆ.
ಕಾರ್ಯಕ್ರಮದಲ್ಲಿ ಕೊಯಂಬತ್ತೂರಿನ ಪ್ರಸಿದ್ಧ ದೇವರ ಸೇವಕರಾದ ಪಿ.ಜೆ. ಡ್ಯಾನಿಯಲ್ ಅವರು ಮುಖ್ಯ ಸಂದೇಶವನ್ನು ನೀಡಲಿದ್ದು, ಇವ್ಯಾಂಜಿಲಿಸ್ಟ್ ಜೈಸನ್ ಅವರು ಆತ್ಮಸ್ಪರ್ಶಿ ಆರಾಧನೆಯನ್ನು ನಡೆಸಲಿದ್ದಾರೆ.
ಈ ಮಹತ್ವದ ಕಾರ್ಯಕ್ರಮಕ್ಕೆ ಸೇವಕರಾದ ಫ್ರೆಡ್ಡಿ ಪಿ.ಸಿ. ಅವರು ನೇತೃತ್ವ ವಹಿಸಲಿದ್ದಾರೆ
